07/08/2026
#ಕಳೆದ_ಹತ್ತು_ವರ್ಷಗಳಲ್ಲಿ_ಮೋದಿ_ಅವರು_ಜನತೆಗೆ_ಏನು_ಒಳಿತು_ಮಾಡಿದ್ದಾರ್ರೀ ?
ಎಂದು ಕೆಲವರು ಪ್ರಶ್ನಿಸುತ್ತಾರೆ. ಬರೀ ಬಂಡಲ್ ಆಶ್ವಾಸನೆಗಳ ಬಡಾಯಿ ಬಿಟ್ಟರೆ ದೇಶಕ್ಕೆ ಏನೇನನ್ನೂ ಮಾಡಿಲ್ಲ. ನಿರುದ್ಯೋಗ ನಿವಾರಣೆ ಮಾಡೇ ಇಲ್ಲ. ಒಂದೇ ಒಂದು ಪತ್ರಿಕಾಗೋಷ್ಠಿ ಕರೆದಿಲ್ಲ. ಬರೀ ಇಲ್ಲ ಇಲ್ಲಗಳೇ!
ವಾಸ್ತವವೆಂದರೆ ಮೋದಿ ಅವರು ದೇಶಕ್ಕಾಗಿ ಮಾಡಿರುವ ಕೆಲಸಗಳು ಅಗಣಿತ,
ಅವುಗಳ ಪಟ್ಟಿ ಮುಗಿಯುವುದೇ ಇಲ್ಲ.
ಭಾರತಕ್ಕೆ ಮತ್ತು ಭಾರತದ ಮಧ್ಯಮ ವರ್ಗದ ಕುಟುಂಬಗಳಿಗೆ ಅವರು ನೀಡಿದ ಕೊಡುಗೆಯಂತೂ ವರ್ಣನಾತೀತ.
ಆದರೂ ಟೀಕಾಕಾರ #ಠೀ ಗಳಿಗೆ ಯಾವುದೂ ಕಾಣದು. ಕೇಳಿಸದು.
ಒಮ್ಮೆ ಔಷಧಿಗಳ ಉದಾಹರಣೆಯನ್ನೇ ನೋಡಿ. ಕಾಂಗ್ರೆಸ್ ಕಾಲದಲ್ಲಿ ಅನ್ನೋದು ಬೇಡ. ೨೦೧೮ ರ ತನಕ ಔಷಧಗಳ ಬೆಲೆ ಎಷ್ಟು ಗಗನಕ್ಕೇರಿತ್ತೆಂದರೆ, ಬಡವರು ಮತ್ತು ಮಧ್ಯಮ ವರ್ಗದವರು ತಮ್ಮ ವೈದ್ಯಕೀಯ ಖರ್ಚನ್ನು ಭರಿಸುವುದೇ ಅತ್ಯಂತ ಕಷ್ಟವಾಗಿತ್ತು.
BP ̧Sugar ಮುಂತಾದ ರೋಗಿಗಳ ಸರಾಸರಿ ಔಷಧಿ ಖರ್ಚು ೭೦೦೦ ರಂದ ೯೦೦೦ ರೂ ಮುಟ್ಟುತ್ತಿತ್ತು.
ಆಗ ಬಂತು ನೋಡಿ ಜನೌಷಧಿ !.
ಇಂದು ಮೋದಿಯವರ ಸರ್ಕಾರ ಜನೌಷಧಿ ಕೇಂದ್ರಗಳ ಮೂಲಕ ಅತಿ ಕಡಿಮೆ ದರದಲ್ಲಿ ಜೆನೆರಿಕ್ ಔಷಧಿಗಳನ್ನು ಒದಗಿಸಿ,
ಮಧ್ಯಮ ವರ್ಗದವರ ಬದುಕನ್ನು ಎಷ್ಟು ಸುಲಭಗೊಳಿಸಿದೆ ಎಂದರೆ ಇಡೀ ವಿಶ್ವವೇ ಬೆರಗಿನಿಂದ ನೋಡುತ್ತಿದೆ.
ಮೋದಿಯವರು ಜಾರಿಗೆ ತಂದ ಈ ಜನೌಷಧಿ ಯೋಜನೆಯು ಮಧ್ಯಮ ವರ್ಗದವರ ಹಾಗೂ ಬಡವರ ಜೇಬಿನ ಮೇಲಿನ ಬೃಹತ್ ಹೊರೆಯನ್ನು ಸಂಪೂರ್ಣವಾಗಿ ತಗ್ಗಿಸಿದೆ.
ಹೀಗೆ ಹೇಳಿದರೆ #ಠೀ ಗಳು ಸುತರಾಂ ಒಪ್ಪರು.
" ಜನೌ಼ಷಧಿ ಅನ್ನೋದೆ ಕಳಪೆ ಬಂಡಲ್ . ಮೋದಿಯ ಡ್ರಾಮಾ. ಪವರ್ರೇ ಇರೋದಿಲ್ಲ.
ನಾವೇ ನೋಡಿದ್ದೀವಲ್ಲ? ಎಫೆಟ್ಟೇ effect ಇಲ್ಲ.
ಇರೋದು ಬರೀ ಸೈಡ್ ಎಫೆಟ್ಟು ಮಾತ್ರ. "
" ಅದು ಹೇಗೆ ಹೇಳ್ತೀರಾ? . ನಾಲ್ಕೈದು ವರ್ಷದಿಂದ ಜನ ದೇಶವಿಡೀ ಬಳಸುತ್ತಾ ಇದ್ದಾರೆ. ಅಪಾಯಕಾರಿ ಆಗಿದ್ದಿದ್ರೆ ಟೀವಿಯ ಕೂಗು ಮಾರಿಗಳು ಬಿಡ್ತಾ ಇದ್ರಾ?
ಮೇಲೆ ಕೆಳಗೆ ಎರಡು ಕಡೇನೂ ಹರ್ಕಂಡು ಅರಚಿಕೊಳ್ತಿದ್ರು "
" ಇಲ್ಲ. ಇದನ್ನು ಹೇಳಿದವರು ಅವರಿವರಲ್ಲ. ಡಾಕ್ಟರುಗಳೇ ಹೇಳಿದ ಮಾತು.
ಈಗ ನೋಡಿ. ರೇಷನ್ ಅಕ್ಕಿನೂ , ಅಂಗಡಿ ಅಕ್ಕಿನೂ ಒಂದೇ ಕ್ವಾಲಿಟಿ ಇರುತ್ತಾ?
ಇದೂ ಹಂಗೆ. ನೋಡ್ತಾ ಇರಿ.
ಸೀರಿಯಸ್ ಸೈಡ್ ಎಫೆಟ್ ಆಗಿ ಬರಬಾರದ ರೋಗಗಳೆಲ್ಲಾ ಬರ್ತವೇ.
ಆಗ ನೀವೇ ಹೇಳತೀರಾ? "
ನನ್ನ ಪರಿಚಯದ ರೋಗಿಗಳು ತಿಂಗಳಿಗೆ ಐದಾರು ಸಾವಿರ ಉಳಿತಾಯವಾಗ್ತಿದೆ ಎಂದು ಪದೆಪದೇ ಹೇಳ್ತಿದ್ದ ಮಾತುಗಳನ್ನು ಕೇಳಿದ್ದೆ. ಅದರೆ ೭೦% - ೮೦% ಉಳಿತಾಯ ಅಂದರೆ ಅದರ ಕ್ವಾಲಿಟಿ ಬಗ್ಗೆ ಅನುಮಾನ ಮೂಡುತ್ತಿತ್ತು.
ಹತ್ತಾರು ಕಡೆ ವಿಚಾರಿಸಿದಾಗ , ಜೆನೆರಿಕ್ ಪದಾರ್ಥ ಯಾವ್ಯಾವ ಪ್ರಮಾಣದಲ್ಲಿರಬೇಕೋ ಅದೇ ಪ್ರಮಾಣದಲ್ಲಿ ಕೊಡಬೇಕು. ಕ್ವಾಲಿಟಿ ಕಂಟ್ರೋಲ್ strict ಆಗಿರುತ್ತೆ. ಕೊಂಚ ಹೆಚ್ಚು ಕಡಿಮೆಯಾದ್ರೂ ಹಾಲಾಹಲವೇಳುತ್ತೆ. ಸರ್ಕಾರವೇ ಉದುರಿ ಹೋಗುತ್ತೆ . ತುಂಬ ಎಚ್ಚರಿಕೆಯಿಂದ ಮ್ಯಾನೇಜ್ ಮಾಡ್ತಾರೆ "
ಅದರೂ ಅಪಸ್ವರಗಳು ನಿಲ್ಲಲಿಲ್ಲ.
ಅಂತೂ ಜನೌಷಧಿಯ ಬಾಗಿಲನ್ನೂ ಮುಚ್ಚಿಸ ಬೇಕು
ಅಂತಹುದೊಂದು ಲಾಬಿ ನಡೆಯಿತು.
ಈಗ ಖಾಸಗಿ ಕಂಪೆನಿಯ ಔಷಧಗಳನ್ನು ಜನೌಷಧಿ ರೇಟಿನಲ್ಲೇ ,
ಜನೌಷಧಿ ಅಂಗಡಿಗಳಲ್ಲೇ ಮಾರಿಸುವಲ್ಲಿ ಲಾಬಿ ಯಶಸ್ವಿಯಾಯಿತು.
ಖಾಸಗಿಯವರು ಜನೌಷಧಿಗಿಂತ ಕಮೀಷನ್ ಜಾಸ್ತಿ ಕೊಡ್ತಾರಂತೆ.
ಅದೇ ರೇಟು. ಆದರೆ ಜನೌಷಧಿಗಿಂತ ಆಕರ್ಷಕ ಪ್ಯಾಕೆಟ್ಟುಗಳು , ರ್ಯಾಪರುಗಳು.
ಜನಕ್ಕೇನು? ಬೆಲೆ ಕಡಿಮೆ ಇದ್ದರೆ ಮುಗಿಯಿತು. ಅದನ್ನೂ ಕೊಂಡರು. ಆದರೆ ಜನೌ಼ಧಿ ಬ್ರಾಂಡ್ ಬೇರೂರಿತ್ತಲ್ಲ. ಖಾಸಗಿ ಔಷಧಿಗಳನ್ನು ಕೊಳ್ಳಲು ಕ್ರಮೇಣ ಹಿಂಜರಿದರು.
ಲಾಬಿ ಮುಂದೆ ಯಾವ ರೂಪ ತಾಳುತ್ತೋ ತಿಳಿಯದು. ಎಷ್ಟೇ ಅಪಪ್ರಚಾರ ಮಾಡಿದರೂ ಜನೌಷಧಿ ಅಂಗಡಿಗಳು ಹೇಗೋ ಉಸಿರಾಡುತ್ತಿವೆ.
* * * *
50 ಅತ್ಯಂತ ದುಬಾರಿ ಮತ್ತು ಪ್ರಾಣರಕ್ಷಕ ಔಷಧಿಗಳ (ಕ್ಯಾನ್ಸರ್, ಅಂಗಾಂಗ ಕಸಿ, ಕಿಡ್ನಿ, ಹೃದಯ ಹಾಗೂ ನರರೋಗ ಚಿಕಿತ್ಸೆಗಳು) ಬ್ರಾಂಡೆಡ್ ಮತ್ತು ಜನೌಷಧಿ ದರಗಳ ಸಂಪೂರ್ಣ ಪಟ್ಟಿ
1️⃣ ಸೈಕ್ಲೋಸ್ಪೋರಿನ್ 100mg (ಅಂಗಾಂಗ ಕಸಿ / Organ Transplant): ಬ್ರಾಂಡೆಡ್ ₹1,800–2,500 ➔ ಜನೌಷಧಿ ₹450 (80% ಉಳಿತಾಯ)
2️⃣ ಟ್ಯಾಕ್ರೋಲಿಮಸ್ 1mg (ಕಿಡ್ನಿ/ಲಿವರ್ ಕಸಿ): ಬ್ರಾಂಡೆಡ್ ₹1,500–2,200 ➔ ಜನೌಷಧಿ ₹380 (80% ಉಳಿತಾಯ)
3️⃣ ಮೈಕೋಫೆನೋಲೇಟ್ ಮೋಫೆಟಿಲ್ 500mg (ಅಂಗಾಂಗ ಕಸಿ ನಿರಾಕರಣೆ ತಡೆ): ಬ್ರಾಂಡೆಡ್ ₹1,200–1,800 ➔ ಜನೌಷಧಿ ₹320 (80% ಉಳಿತಾಯ)
4️⃣ ಇಮಾಟಿನಿಬ್ 400mg (ರಕ್ತದ ಕ್ಯಾನ್ಸರ್ / Leukaemia): ಬ್ರಾಂಡೆಡ್ ₹2,500–3,500 ➔ ಜನೌಷಧಿ ₹450 (85% ಉಳಿತಾಯ)
5️⃣ ಗೆಫಿಟಿನಿಬ್ 250mg (ಶ್ವಾಸಕೋಶದ ಕ್ಯಾನ್ಸರ್ / Lung Cancer): ಬ್ರಾಂಡೆಡ್ ₹8,000–12,000 ➔ ಜನೌಷಧಿ ₹1,600 (85% ಉಳಿತಾಯ)
6️⃣ ಎರ್ಲೋಟಿನಿಬ್ 150mg (ಕ್ಯಾನ್ಸರ್ ಕಿಮೊಥೆರಪಿ): ಬ್ರಾಂಡೆಡ್ ₹18,000–24,000 ➔ ಜನೌಷಧಿ ₹3,200 (83% ಉಳಿತಾಯ)
7️⃣ ಸೊರಾಫೆನಿಬ್ 200mg (ಲಿವರ್ ಮತ್ತು ಕಿಡ್ನಿ ಕ್ಯಾನ್ಸರ್): ಬ್ರಾಂಡೆಡ್ ₹12,000–16,000 ➔ ಜನೌಷಧಿ ₹2,200 (84% ಉಳಿತಾಯ)
8️⃣ ಲೆನಾಲಿಡೊಮೈಡ್ 25mg (ಬೋನ್ ಮ್ಯಾರೋ ಕ್ಯಾನ್ಸರ್): ಬ್ರಾಂಡೆಡ್ ₹15,000–20,000 ➔ ಜನೌಷಧಿ ₹2,800 (85% ಉಳಿತಾಯ)
9️⃣ ಕ್ಯಾಪೆಸಿಟಾಬೈನ್ 500mg (ಸ್ತನ ಮತ್ತು ಕರುಳಿನ ಕ್ಯಾನ್ಸರ್): ಬ್ರಾಂಡೆಡ್ ₹1,500–2,200 ➔ ಜನೌಷಧಿ ₹254 (88% ಉಳಿತಾಯ)
🔟 ಟೆಮೋಜೋಲೋಮೈಡ್ 250mg (ಮಿದುಳಿನ ಕ್ಯಾನ್ಸರ್ / Brain Tumour): ಬ್ರಾಂಡೆಡ್ ₹12,000–18,000 ➔ ಜನೌಷಧಿ ₹2,500 (85% ಉಳಿತಾಯ)
1️⃣1️⃣ ಬೋರ್ಟೆಝೋಮಿಬ್ 3.5mg ಇಂಜೆಕ್ಷನ್ (ಮಲ್ಟಿಪಲ್ ಮೈಲೋಮಾ): ಬ್ರಾಂಡೆಡ್ ₹10,000–14,000 ➔ ಜನೌಷಧಿ ₹1,800 (86% ಉಳಿತಾಯ)
1️⃣2️⃣ ಸಿಟಾರಬೈನ್ 1000mg ಇಂಜೆಕ್ಷನ್ (ರಕ್ತದ ಕ್ಯಾನ್ಸರ್): ಬ್ರಾಂಡೆಡ್ ₹2,000–3,200 ➔ ಜನೌಷಧಿ ₹350 (88% ಉಳಿತಾಯ)
1️⃣3️⃣ ಪ್ಯಾಕ್ಲಿಟಾಕ್ಸೆಲ್ 260mg ಇಂಜೆಕ್ಷನ್ (ಸ್ತನ/ಅಂಡಾಶಯದ ಕ್ಯಾನ್ಸರ್): ಬ್ರಾಂಡೆಡ್ ₹8,000–12,000 ➔ ಜನೌಷಧಿ ₹1,500 (85% ಉಳಿತಾಯ)
1️⃣4️⃣ ಡೋಸೆಟಾಕ್ಸೆಲ್ 120mg ಇಂಜೆಕ್ಷನ್ (ಪ್ರಾಸ್ಟೇಟ್/ಶ್ವಾಸಕೋಶದ ಕ್ಯಾನ್ಸರ್): ಬ್ರಾಂಡೆಡ್ ₹15,000–18,700 ➔ ಜನೌಷಧಿ ₹2,700 (85% ಉಳಿತಾಯ)
1️⃣5️⃣ ಆಕ್ಸಾಲಿಪ್ಲಾಟಿನ್ 100mg ಇಂಜೆಕ್ಷನ್ (ಕರುಳಿನ ಕ್ಯಾನ್ಸರ್): ಬ್ರಾಂಡೆಡ್ ₹4,500–6,500 ➔ ಜನೌಷಧಿ ₹950 (83% ಉಳಿತಾಯ)
1️⃣6️⃣ ಜೆಮ್ಸಿಟಾಬೈನ್ 1000mg ಇಂಜೆಕ್ಷನ್ (ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್): ಬ್ರಾಂಡೆಡ್ ₹4,000–6,000 ➔ ಜನೌಷಧಿ ₹760 (86% ಉಳಿತಾಯ)
1️⃣7️⃣ ಜೊಲೆಡ್ರೋನಿಕ್ ಆಸಿಡ್ 4mg (ಮೂಳೆ ಕ್ಯಾನ್ಸರ್/ಆಸ್ಟಿಯೋ ಪೋರೋಸಿಸ್): ಬ್ರಾಂಡೆಡ್ ₹3,500–5,000 ➔ ಜನೌಷಧಿ ₹650 (85% ಉಳಿತಾಯ)
1️⃣8️⃣ ರಿಟುಕ್ಸಿಮ್ಯಾಬ್ 500mg (ಲಿಂಫೋಮಾ/ಕ್ಯಾನ್ಸರ್ ಬಯೋಲಾಜಿಕ್): ಬ್ರಾಂಡೆಡ್ ₹35,000–45,000 ➔ ಜನೌಷಧಿ ₹8,500 (80% ಉಳಿತಾಯ)
1️⃣9️⃣ ಟ್ರಾಸ್ಟುಜುಮ್ಯಾಬ್ 440mg (ಸ್ತನ ಕ್ಯಾನ್ಸರ್ ಬಯೋಲಾಜಿಕ್): ಬ್ರಾಂಡೆಡ್ ₹40,000–55,000 ➔ ಜನೌಷಧಿ ₹12,000 (78% ಉಳಿತಾಯ)
2️⃣0️⃣ ಲೆಟ್ರೋಜೋಲ್ 2.5mg (ಹಾರ್ಮೋನ್ ಕ್ಯಾನ್ಸರ್ ಮಾತ್ರೆ): ಬ್ರಾಂಡೆಡ್ ₹350–500 ➔ ಜನೌಷಧಿ ₹45 (90% ಉಳಿತಾಯ)
2️⃣1️⃣ ಅನಸ್ಟ್ರೋಜೋಲ್ 1mg (ಸ್ತನ ಕ್ಯಾನ್ಸರ್ ತಡೆ): ಬ್ರಾಂಡೆಡ್ ₹600–900 ➔ ಜನೌಷಧಿ ₹80 (90% ಉಳಿತಾಯ)
2️⃣2️⃣ ಬಿಕಾಲುಟಮೈಡ್ 50mg (ಪ್ರಾಸ್ಟೇಟ್ ಕ್ಯಾನ್ಸರ್): ಬ್ರಾಂಡೆಡ್ ₹800–1,200 ➔ ಜನೌಷಧಿ ₹150 (87% ಉಳಿತಾಯ)
2️⃣3️⃣ ಅಬಿರಟೆರೋನ್ ಅಸಿಟೇಟ್ 250mg (ತೀವ್ರ ಪ್ರಾಸ್ಟೇಟ್ ಕ್ಯಾನ್ಸರ್): ಬ್ರಾಂಡೆಡ್ ₹18,000–28,000 ➔ ಜನೌಷಧಿ ₹3,800 (86% ಉಳಿತಾಯ)
2️⃣4️⃣ ಎನ್ಜಾಲುಟಮೈಡ್ 40mg (ಅಡ್ವಾನ್ಸ್ ಕ್ಯಾನ್ಸರ್ ಚಿಕಿತ್ಸೆ): ಬ್ರಾಂಡೆಡ್ ₹22,000–32,000 ➔ ಜನೌಷಧಿ ₹4,500 (85% ಉಳಿತಾಯ)
2️⃣5️⃣ ಎವೆರೋಲಿಮಸ್ 10mg (ಕಿಡ್ನಿ/ಸ್ತನ ಟ್ಯೂಮರ್): ಬ್ರಾಂಡೆಡ್ ₹25,000–35,000 ➔ ಜನೌಷಧಿ ₹5,200 (85% ಉಳಿತಾಯ)
2️⃣6️⃣ ಸುನಿಟಿನಿಬ್ 50mg (ಕಿಡ್ನಿ ಕ್ಯಾನ್ಸರ್ ಮಾತ್ರೆ): ಬ್ರಾಂಡೆಡ್ ₹20,000–28,000 ➔ ಜನೌಷಧಿ ₹4,000 (80% ಉಳಿತಾಯ)
2️⃣7️⃣ ಡಾಕ್ಸೊರುಬಿಸಿನ್ 50mg ಇಂಜೆಕ್ಷನ್ (ಕ್ಯಾನ್ಸರ್ ಕಿಮೊ): ಬ್ರಾಂಡೆಡ್ ₹1,500–2,500 ➔ ಜನೌಷಧಿ ₹250.50 (89% ಉಳಿತಾಯ)
2️⃣8️⃣ ಎಟೋಪೋಸೈಡ್ 100mg ಇಂಜೆಕ್ಷನ್ (ಕ್ಯಾನ್ಸರ್ ಚಿಕಿತ್ಸೆ): ಬ್ರಾಂಡೆಡ್ ₹500–800 ➔ ಜನೌಷಧಿ ₹76 (90% ಉಳಿತಾಯ)
2️⃣9️⃣ ಸಿಸ್ಪ್ಲಾಟಿನ್ 50mg ಇಂಜೆಕ್ಷನ್ (ಕ್ಯಾನ್ಸರ್ ಕಿಮೊ): ಬ್ರಾಂಡೆಡ್ ₹800–1,200 ➔ ಜನೌಷಧಿ ₹165 (85% ಉಳಿತಾಯ)
3️⃣0️⃣ ಕಾರ್ಬೋಪ್ಲಾಟಿನ್ 450mg ಇಂಜೆಕ್ಷನ್ (ಅಂಡಾಶಯ ಕ್ಯಾನ್ಸರ್): ಬ್ರಾಂಡೆಡ್ ₹2,200–3,200 ➔ ಜನೌಷಧಿ ₹420 (86% ಉಳಿತಾಯ)
3️⃣1️⃣ ಇಫೋಸ್ಫಮೈಡ್ 1g ಇಂಜೆಕ್ಷನ್ (ಕ್ಯಾನ್ಸರ್ ಚಿಕಿತ್ಸೆ): ಬ್ರಾಂಡೆಡ್ ₹1,800–2,400 ➔ ಜನೌಷಧಿ ₹310 (87% ಉಳಿತಾಯ)
3️⃣2️⃣ ಬ್ಲಿಯೋಮೈಸಿನ್ 15IU ಇಂಜೆಕ್ಷನ್ (ಲಿಂಫೋಮಾ): ಬ್ರಾಂಡೆಡ್ ₹1,200–1,800 ➔ ಜನೌಷಧಿ ₹300 (83% ಉಳಿತಾಯ)
3️⃣3️⃣ ಮೆಥೋಟ್ರೆಕ್ಸೇಟ್ 50mg ಇಂಜೆಕ್ಷನ್ (ಆಟೋಇಮ್ಯೂನ್/ಕ್ಯಾನ್ಸರ್): ಬ್ರಾಂಡೆಡ್ ₹400–650 ➔ ಜನೌಷಧಿ ₹75 (88% ಉಳಿತಾಯ)
3️⃣4️⃣ ಎರಿಥ್ರೋಪೊಯಿಟಿನ್ 4000 IU (ಕಿಡ್ನಿ ರೋಗಿಗಳ ರಕ್ತ ಹೆಚ್ಚಳ): ಬ್ರಾಂಡೆಡ್ ₹1,500–2,200 ➔ ಜನೌಷಧಿ ₹360 (83% ಉಳಿತಾಯ)
3️⃣5️⃣ ಐರನ್ ಸುಕ್ರೋಸ್ 100mg ಇಂಜೆಕ್ಷನ್ (ತೀವ್ರ ರಕ್ತಹೀನತೆ): ಬ್ರಾಂಡೆಡ್ ₹350–550 ➔ ಜನೌಷಧಿ ₹65 (88% ಉಳಿತಾಯ)
3️⃣6️⃣ ಸೆವೆಲಮರ್ ಹೈಡ್ರೋಕ್ಲೋರೈಡ್ 800mg (ಕಿಡ್ನಿ ಡಯಾಲಿಸಿಸ್): ಬ್ರಾಂಡೆಡ್ ₹900–1,400 ➔ ಜನೌಷಧಿ ₹180 (87% ಉಳಿತಾಯ)
3️⃣7️⃣ ಕಟೋಸ್ಟೆರಿಲ್/ಆಲ್ಫಾ ಕಟೋಎನಾಲಾಗ್ (ಕಿಡ್ನಿ ಡ್ಯಾಮೇಜ್ ನಿಯಂತ್ರಣ): ಬ್ರಾಂಡೆಡ್ ₹2,200–3,000 ➔ ಜನೌಷಧಿ ₹550 (80% ಉಳಿತಾಯ)
3️⃣8️⃣ ಪಿಪರಾಸಿಲಿನ್ + ಟಾಜೋಬ್ಯಾಕ್ಟಮ್ 4.5g (ತುರ್ತು ಸಿರಪ್/ಐಸಿಯು ಆಂಟಿಬಯೋಟಿಕ್): ಬ್ರಾಂಡೆಡ್ ₹500–800 ➔ ಜನೌಷಧಿ ₹120 (83% ಉಳಿತಾಯ)
3️⃣9️⃣ ಮೆರೋಪೆನೆಮ್ 1g ಇಂಜೆಕ್ಷನ್ (ಐಸಿಯು ತೀವ್ರ ಸೋಂಕು): ಬ್ರಾಂಡೆಡ್ ₹1,200–1,800 ➔ ಜನೌಷಧಿ ₹236 (85% ಉಳಿತಾಯ)
4️⃣0️⃣ ಕೊಲಿಸ್ಟಿನ್ 3 Million IU (ತೀವ್ರ ಬ್ಯಾಕ್ಟೀರಿಯಲ್ ಸೋಂಕು): ಬ್ರಾಂಡೆಡ್ ₹3,500–5,000 ➔ ಜನೌಷಧಿ ₹850 (83% ಉಳಿತಾಯ)
4️⃣1️⃣ ವಾಂಕೋಮೈಸಿನ್ 1g ಇಂಜೆಕ್ಷನ್ (ಐಸಿಯು ಪ್ರಾಣರಕ್ಷಕ ಇಂಜೆಕ್ಷನ್): ಬ್ರಾಂಡೆಡ್ ₹600–1,000 ➔ ಜನೌಷಧಿ ₹140 (85% ಉಳಿತಾಯ)
4️⃣2️⃣ ಟೈಗೆಸೈಕ್ಲಿನ್ 50mg ಇಂಜೆಕ್ಷನ್ (ಸಂಕೀರ್ಣ ಇನ್ಫೆಕ್ಷನ್): ಬ್ರಾಂಡೆಡ್ ₹2,500–4,000 ➔ ಜನೌಷಧಿ ₹600 (85% ಉಳಿತಾಯ)
4️⃣3️⃣ ಹ್ಯೂಮನ್ ಆಲ್ಬುಮಿನ್ 20% 100ml (ಲಿವರ್/ಕಿಡ್ನಿ ವೈಫಲ್ಯ ತಡೆ): ಬ್ರಾಂಡೆಡ್ ₹4,500–6,500 ➔ ಜನೌಷಧಿ ₹1,650 (73% ಉಳಿತಾಯ)
4️⃣4️⃣ ಎನೋಕ್ಸಪರಿನ್ 60mg ಇಂಜೆಕ್ಷನ್ (ರಕ್ತ ಹೆಪ್ಪುಗಟ್ಟುವಿಕೆ ತಡೆ): ಬ್ರಾಂಡೆಡ್ ₹650–950 ➔ ಜನೌಷಧಿ ₹140 (82% ಉಳಿತಾಯ)
4️⃣5️⃣ ರಿವರೊಕ್ಸಾಬಾನ್ 10mg (ಸ್ಟ್ರಾಕ್ ಮತ್ತು ಬಿಪಿ ರಕ್ತ ಹೆಪ್ಪುಗಟ್ಟುವಿಕೆ ತಡೆ): ಬ್ರಾಂಡೆಡ್ ₹1,200–1,800 ➔ ಜನೌಷಧಿ ₹220 (85% ಉಳಿತಾಯ)
4️⃣6️⃣ ನೈಟ್ರೋಗ್ಲಿಸರಿನ್ ಸಸ್ಟೇನ್ಡ್ ರಿಲೀಸ್ 2.6mg (ಹೃದಯ ಶಸ್ತ್ರಚಿಕಿಷೆ/ಏಂಜಿನಾ): ಬ್ರಾಂಡೆಡ್ ₹250–400 ➔ ಜನೌಷಧಿ ₹35 (90% ಉಳಿತಾಯ)
4️⃣7️⃣ ಪ್ರಸಾಗ್ರೆಲ್ 10mg (ಆಂಜಿಯೋಪ್ಲಾಸ್ಟಿ ನಂತರ ರಕ್ತ ತೆಳುಗೊಳಿಸುವುದು): ಬ್ರಾಂಡೆಡ್ ₹350–550 ➔ ಜನೌಷಧಿ ₹55 (90% ಉಳಿತಾಯ)
4️⃣8️⃣ ಟಿಕಾಗ್ರೆಲೋರ್ 90mg (ಹಾರ್ಟ್ ಅಟ್ಯಾಕ್ ಬೈಪಾಸ್ ರಕ್ಷಣೆ): ಬ್ರಾಂಡೆಡ್ ₹1,500–2,200 ➔ ಜನೌಷಧಿ ₹280 (86% ಉಳಿತಾಯ)
4️⃣9️⃣ ಪ್ರೆಗಾಬಾಲಿನ್ 150mg + ಮೆಕೋಬಾಲಮಿನ್ (ತೀವ್ರ ನರಗಳ ನೋವು / Neuropathy): ಬ್ರಾಂಡೆಡ್ ₹250–400 ➔ ಜನೌಷಧಿ ₹45 (88% ಉಳಿತಾಯ)
5️⃣0️⃣ ಲಿರಾಗ್ಲುಟೈಡ್ / ಸೆಮಾಗ್ಲುಟೈಡ್ ಇಂಜೆಕ್ಷನ್ (ತೀವ್ರ ಒಬೆಸಿಟಿ ಮತ್ತು ಸಕ್ಕರೆ ಕಾಯಿಲೆ): ಬ್ರಾಂಡೆಡ್ ₹4,500–7,000 ➔ ಜನೌಷಧಿ ₹1,200 (80% ಉಳಿತಾಯ)