29/08/2026
ಸೋರಿಯಾಸಿಸ್ ಲಕ್ಷಣಗಳು, ವಿಧಗಳು ಮತ್ತು ಚಿಕಿತ್ಸೆ
ಸೋರಿಯಾಸಿಸ್ ಒಂದು ದೀರ್ಘಕಾಲದ, ಸಾಂಕ್ರಾಮಿಕವಲ್ಲದ, ರೋಗನಿರೋಧಕ ಶಕ್ತಿಯ ವೈಪರೀತ್ಯದಿಂದ ಉಂಟಾಗುವ, ಉರಿಯೂತದ (inflammation) ಚರ್ಮದ ತೊಂದರೆಯಾಗಿದೆ. ಇದು ಮುಖ್ಯವಾಗಿ ಚರ್ಮದ ಎಪಿಡರ್ಮಲ್ ಕೋಶಗಳ ಪದರವನ್ನು ಬಾಧಿಸುತ್ತದೆ ಮತ್ತು ಚರ್ಮ ಕೋಶಗಳ ಉತ್ಪಾದನೆಯನ್ನು ಅನಿಯಮಿತವಾಗಿ ಹೆಚ್ಚಿಸುತ್ತದೆ.
ಸಾಮಾನ್ಯವಾಗಿ ಇದು ತುರಿಕೆ, ಗಂದೆ ರೂಪದ ಚರ್ಮ ವ್ಯಾಧಿಯಾಗಿದ್ದು, ಬೆಳ್ಳಿಯ ಪದರಗಳ ರೂಪದಲ್ಲಿ ಚರ್ಮದ ನಿರ್ಜೀವ ಕೋಶಗಳು ಶೇಖರಣೆಗೊಂಡು ನಿರಂತರವಾಗಿ ಚಕ್ಕೆಗಳ ರೂಪದಲ್ಲಿ ಬೀಳುತ್ತಿರುತ್ತದೆ. ಸೋರಿಯಾಸಿಸ್ ರೋಗಿಗಳಲ್ಲಿನ ರೋಗಲಕ್ಷಣಗಳು ಪ್ರತಿ ರೋಗಿಗಳಿಗೆ ವ್ಯತ್ಯಾಸಗೊಳ್ಳುತ್ತದೆ ಹಾಗೂ ರೋಗದ ತೀವ್ರತೆಯು ರೋಗದ ಮರುಕಳಿಸುವಿಕೆಯ ಹಾಗೂ ಹೆಚ್ಚುವಿಕೆ ಮೇಲೆ ನಿರ್ಧಾರವಾಗಿರುತ್ತದೆ.
ಸೋರಿಯಾಸಿಸ್ ಕೇವಲ ದೈಹಿಕವಾಗಿ ಮಾತ್ರವಲ್ಲದೆ ರೋಗಿಯ ಭಾವನಾತ್ಮಕ ಹಾಗೂ ಮಾನಸಿಕ ಸ್ವಾಸ್ಥ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಸೋರಿಯಾಸಿಸ್ ಚಿಕಿತ್ಸೆಯಲ್ಲಿ ವಿವಿಧ ರೀತಿಯ ದೇಹಕ್ಕೆ ಹಚ್ಚುವ ಹಾಗೂ ಒಳಗೆ ಸೇವಿಸುವ ಔಷಧಿಗಳನ್ನು ಮತ್ತು ಅಲ್ಟ್ರಾ ವೈಲೆಟ್ ಲೈಟ್ ಚಿಕಿತ್ಸೆಯನ್ನೂ ಬಳಸುತ್ತಾರೆ.
https://www.psoriasistreatmentbangalore.com/psoriasis-lakshanagalu-vidhagalu-mattu-cikitse/
ಸೋರಿಯಾಸಿಸ್ ಎಂದರೇನು? ಅದರ ಲಕ್ಷಣಗಳು, ಕಾರಣಗಳು, ವಿಧಗಳು, ಮತ್ತು ವಿವಿಧ ಚಿಕಿತ್ಸೆಗಳ ಬಗ್ಗೆ ಸರಳ ಕನ್ನಡದಲ್ಲಿ ತಿಳಿಯಿರಿ. ಹೆಚ್ಚಿನ...